“ಯೂನಿವರ್ಸಲ್ ಪ್ರೇಮಿಯರ್ ಕಪ್ ” ಕ್ರಿಕೆಟ್ ಪಂದ್ಯಾಟ

ಯುನಿವರ್ಸಲ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ ನೆರೆಹೊರೆಯ ಪರಿಸರದ ಕ್ರೀಡಾ ಪ್ರೇಮಿಗಳಿಗಾಗಿ “ಯೂನಿವರ್ಸಲ್ ಪ್ರೀಮಿಯರ್ ಕಪ್” ಕ್ರಿಕೆಟ್ ಪಂದ್ಯಾಟವನ್ನು ಜನವರಿ 28 ಹಾಗೂ 29,2023 ರಂದು ಸಂಸ್ಥೆಯ ಹಸಿರು ಹುಲ್ಲಿನ ಸುಂದರ ಅಂಗಣದಲ್ಲಿ ಆಯೋಜಿಸಲಾಗಿತ್ತು. ಪಂದ್ಯಾಟದ ಉದ್ಘಾಟನೆಯನ್ನು ಸಂಸ್ಥೆಯ ಸಂಸ್ಥಾಪಕ ಚೇರ್ಮನರಾದ ಶ್ರೀ ಉಪೇಂದ್ರ ಶೆಟ್ಟಿ, ಸ್ಥಳೀಯರಾದ ಬೆಂಗಳೂರು ಉತ್ತರ ವಲಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಆರ್ ಪಿ ಪ್ರಕಾಶ್ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಿರಿಯ ತರಬೇತುರಾದ ಶ್ರೀ ವಿಜಯಕುಮಾರ್, ಯೂನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಪ್ರಾಂಶುಪಾಲರಾದ ಶ್ರೀಮತಿ ಸರಸ್ವತಿ ಕುಂಬಳೆ, ಯೂನಿವರ್ಸಲ್ ಸ್ಕೂಲ್ ಆಫ್ ಲಾ ಪ್ರಾಂಶುಪಾಲರಾದ ಶ್ರೀ ವಿಶ್ವಾಸ್ ಪುಟ್ಟಸ್ವಾಮಿ, ಯುಪಿಎಸ್ಸಿ ವಿಭಾಗದ ಪ್ರಾಂಶುಪಾಲರಾದ ಡಾ. ಕೇಶವ ನೀರ, ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಸಂತೋಷ್ ಶೆಟ್ಟಿ ರವರು ನೆರವೇರಿಸಿದರು.

ಪಂದ್ಯಾಟದಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಬೇರೆ ಬೇರೆ ಶಿಕ್ಷಣ ಸಂಸ್ಥೆಗಳ ಹಾಗೂ ಸಾರ್ವಜನಿಕ ತಂಡಗಳೂ ಸೇರಿದಂತೆ 25 ತಂಡಗಳು ಭಾಗವಹಿಸಿ ಕ್ರೀಡಾ ಪ್ರೇಮಿಗಳಿಗೆ ಕ್ರಿಕೆಟ್ ಪಂದ್ಯದ ರಸದೌತಣವನ್ನು ಉಣಬಡಿಸಿದರು. ನಿರಂತರ ಎರಡು ದಿನಗಳು ನಡೆದ ಪಂದ್ಯಾಟದ ತೀರ್ಮಾನ ಕಾರಕರಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹಿರಿಯ ಆಟಗಾರರ ಸೇವೆಯನ್ನು ಬಳಸಿಕೊಳ್ಳಲಾಗಿತ್ತು.

 

ವಿಜೇತ ತಂಡಕ್ಕೆ ಭವ್ಯವಾದ ಟ್ರೋಫಿ ಹಾಗೂ ರೂ.25,000 ನಗದು ಬಹುಮಾನ ಹಾಗೂ ದ್ವಿತೀಯ ಸ್ಥಾನದ ತಂಡಕ್ಕೆ ಟ್ರೋಫಿ ಹಾಗೂ ರೂ.15,000 ನಗದು ಬಹುಮಾನವನ್ನು ನೀಡಲಾಗಿತ್ತು. ಪ್ರಥಮ ಬಹುಮಾನವನ್ನು ಬೆಂಗಳೂರು ನಗರದ ಮೈತ್ರೆಯೀ ತಂಡ ಜಯಿಸಿದರೆ ದ್ವಿತೀಯ ಸ್ಥಾನವಾಗಿ ರಾಮೋಹಳ್ಳಿ ಯುವ ಮೋರ್ಚ ಪ್ರಶಸ್ತಿಯನ್ನು ಗಳಿಸಿದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಚೇರ್ಮನ್ ಶ್ರೀ ಆರ್ ಉಪೇಂದ್ರ ಶೆಟ್ಟಿ , ಸ್ಥಳೀಯ ವೈದ್ಯರಾದ ಡಾ. ಸುನಿಲ್, ಶ್ರೀ ಪೃಥ್ವಿರಾಜ್ ಆರಸ್, ಸಂಸ್ಥೆಯ ಆಡಳಿತಾಧಿಕಾರಿ ಶ್ರೀ ಜೆ ಸಂತೋಷ್ ಶೆಟ್ಟಿ, ಸಂಸ್ಥೆಯ ಯುಪಿಎಸ್‌ಸಿ ವಿಭಾಗದ ಪ್ರಾಂಶುಪಾಲರಾದ ಡಾ. ಕೇಶವ ನೀರಾ, ಸಂಸ್ಥೆಯ ಹೆಚ್ ಆರ್ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಚಿತ್ರ ಶೆಟ್ಟಿ, ಯುಪಿಎಸ್ಸಿ ತರಬೇತುರಾದ ಶ್ರೀ ನವೀನ್ ಕುಮಾರ್ ಉಪಸ್ಥಿತರಿದ್ದು ಎರಡು ದಿನಗಳ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನಿಗೆ ಅತ್ಯುತ್ತಮ ಆಟಗಾರ ಪ್ರಶಸ್ತಿ, ಅತ್ಯುತ್ತಮ ಬೌಲರ್ ಪ್ರಶಸ್ತಿ ಮತ್ತು ಅತ್ಯುತ್ತಮ ಬ್ಯಾಟ್ಸ್ ಮ್ಯಾನ್ ಪ್ರಶಸ್ತಿ ಯನ್ನು ನೀಡಲಾಯಿತು. ಭಾಗವಹಿಸಿದ ಎಲ್ಲಾ ತಂಡಗಳಿಗೂ ಸಂಸ್ಥೆಯ ಪರವಾಗಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕ್ರೀಡಾಕೂಟದ ಕೊನೆಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ, ಸಹಕರಿಸಿದ ಎಲ್ಲಾ ಕ್ರೀಡಾ ಪ್ರೇಮಿಗಳಿಗೂ, ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ಶ್ರಮಿಸಿದ ಸಂಸ್ಥೆಯ ದೈಹಿಕ ಶಿಕ್ಷಕ ನಿರ್ದೇಶಕರಾದ ಶ್ರೀ ಓಂಕಾರಪ್ಪ ಹಾಗೂ ಕ್ರೀಡಾ ಸಮಿತಿ ಮತ್ತು ಸಿಬ್ಬಂದಿ ವರ್ಗದವರಿಗೂ ಧನ್ಯವಾದಗಳನ್ನು ತಿಳಿಸಿ ಯಶಸ್ವಿ ಕ್ರೀಡಾಕೂಟಕ್ಕೆ ಮುಕ್ತಾಯವನ್ನು ಹಾಡಲಾಯಿತು.