೨೦೨೩-೨೦೨೪ರ ಯೂನಿವರ್ಸಲ್ ಬಜೆಟ್‌ನ ಮೇಲೆ ಯೂನಿವರ್ಸಲ್ ಶಿಕ್ಷಣ ಸಂಸ್ಥೆಯ ನಾಗರೀಕ ಸೇವಾ ಆಕಾಂಕ್ಷೆಗಳು ನಡೆಸಿದ ಚರ್ಚೆ.

ಫೆಬ್ರವರಿ ೬/೨೦೨೩ ಯೂನಿವರ್ಸಲ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಸಮಿತಿಯು ಆಯೋಜಿಸಿದ್ದ ೨೦೨೩-೨೪ರ ವಾರ್ಷಿಕ ಬಜೆಟ್ ಮಂಡನೆಯಲ್ಲಿ ೧೭ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ. ಪ್ರಮುಖವಾಗಿ ವಿದ್ಯಾರ್ಥಿಗಳು ವಾರ್ಷಿಕ ಬಜೆಟ್‌ನ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಚರ್ಚೆ ನಡೆಸಿದರು ಅದರಲ್ಲಿ ಪ್ರಮುಖವಾಗಿ.

  • ಆರ್ಥಿಕ ಬೆಳವಣಿಗೆ.
  • ಸಾಮಾಜಿಕ ಅಭಿವೃದ್ಧಿ.
  • ಮಹಿಳಾ ಸಶಕ್ತಿಕರಣ.
  • ಗ್ರಾಮೀಣ ಉದ್ಯೋಗ ಅಭಿವೃದ್ಧಿ.
  • ಶಿಕ್ಷಣ.
  • ಕೃಷಿ.
  • ಹಸಿರುಶಕ್ತಿ.

ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಅನುಕೂಲಗಳು ಮತ್ತು ಅನಾನುಕೂಲಗಳ ಮತ್ತು ಕುಂದು ಕೊರತೆಗಳ ಬಗ್ಗೆ ಚರ್ಚಿಸಿದರು.

ಇದಲ್ಲದೆ ವಿದ್ಯಾರ್ಥಿಗಳು ಬಜೆಟ್ಟಿನ ಕುಂದು ಕೊರತೆಗಳನ್ನು ಸಹ ಗುರುತಿಸಿದ್ದಾರೆ ಅದರಲ್ಲಿ ಪ್ರಮುಖವಾಗಿ ವಿದ್ಯಾರ್ಥಿಗಳು ಗುರುತಿಸಿದ ವಿಷಯಗಳು ಈ ಕೆಳಕಂಡಂತೆ ಇದೆ.

  1. ಜಿಡಿಪಿ ಬೆಳಗವಣಿಗೆಯನ್ನು ಉತ್ತೇಜಿಸುವುದು.
  2. ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ಯುವಕರಲ್ಲಿನ ಹಿತಾಸಕ್ತಿ ಮತ್ತು ಆಸಕ್ತಿ ವಿಷಯಗಳ ಕುರಿತು ಯುವಕರನ್ನು ಉತ್ತೇಜಿಸುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಪಾತ್ರವು ಯಾವ ರೀತಿ ಇರಬೇಕೆಂದು ಸಹ ವಿದ್ಯಾರ್ಥಿಗಳು ಚರ್ಚೆ ನಡೆಸಿದ್ದು ವಿಶೇಷವಾಗಿತ್ತು.
  3. ವಿದ್ಯಾರ್ಥಿಗಳು ಮತ್ತು ಯುವಕರ ಮುಂದಿನ ಭವಿಷ್ಯದ ನಿರ್ಮಾಣಕ್ಕೆ ಬೇಕಾದ ಎಲ್ಲ ರೀತಿಯ ಉದ್ಯೋಗ ಖಾತ್ರಿ ವಿಷಯಗಳ ಬಗ್ಗೆ ಸಹ ಚಿಂತನೆ ನಡೆಸಿದರು.
  4. ಬಲವಾದ ಮತ್ತು ಅಚಲವಾದ ಸೂಕ್ಷ್ಮ ಆರ್ಥಿಕ ಪರಿಸರದ ಬಗ್ಗೆ ಚರ್ಚೆ ನಡೆಸಿದರು ಇದರಿಂದ ಸುಲಭವಾಗಿ ವ್ಯವಹಾರ ಮಾಡಬಹುದು. ಇದರಿಂದ ಆರ್ಥಿಕ ವ್ಯವಸ್ಥೆಯನ್ನು ಚೇತರಿಸಲು ಮತ್ತು ಶಕ್ತಿಕರಿಸಲು ಸಹಾಯವಾಗುತ್ತದೆ ಎಂದು ವಿದ್ಯಾರ್ಥಿಗಳು ಭಾರತದ ಆರ್ಥಿಕ ವ್ಯವಸ್ಥೆಯ ಮೇಲಿನ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೊನೆಯದಾಗಿ ೨೦೨೩-೨೪ರ ವಾರ್ಷಿಕ ಬಜೆಟ್ ಕುರಿತು ವಿದ್ಯಾರ್ಥಿಗಳ ನಡೆಸಿದ ಚರ್ಚೆಯಲ್ಲಿ ಭಾರತದ ಆರ್ಥಿಕ ವ್ಯವಸ್ಥೆಯ ಬಗ್ಗೆ ಮತ್ತು ಅದರ ಶಕ್ತಿಕರಿಸುವ ಕುರಿತು ಸುಂದರವಾಗಿ ಮತ್ತು ಯಶಸ್ವಿಯಾಗಿ ಚರ್ಚೆಯನ್ನು ಪೂರ್ಣಗೊಳಿಸಲಾಯಿತು.