ಇಂಟಿಗ್ರೇಟೆಡ್ ಕೋರ್ಸ್ ನೊಂದಿಗೆ ಸಿವಿಲ್ ಸರ್ವಿಸ್ ತರಬೇತಿಯ ಮಹತ್ವ

ಇಂಟಿಗ್ರೇಟೆಡ್ ಕೋರ್ಸ್ ನೊಂದಿಗೆ ಸಿವಿಲ್ ಸರ್ವಿಸ್ ತರಬೇತಿಯ ಮಹತ್ವ

ಇಂಟಿಗ್ರೇಟೆಡ್ ಕೋರ್ಸ್ ನೊಂದಿಗೆ ಸಿವಿಲ್ ಸರ್ವಿಸ್ ತರಬೇತಿಯ ಮಹತ್ವ:
ಐ.ಎ.ಎಸ್/ ಐ.ಪಿ.ಎಸ್ ಹಾಗೂ ಇತರೆ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರತಿಷ್ಠಿತ ಹುದ್ದೆಗೇರಿ, ಸರ್ಕಾರಿ ಸೇವೆ ಮಾಡಬೇಕು ಎಂಬುದು ಅದೆಷ್ಟೋ ವಿದ್ಯಾರ್ಥಿಗಳ ಕನಸು. ಈ ಕನಸಿನ ಸಾಕಾರತೆಗೆ ಸತತ ಪರಿಶ್ರಮ, ಸಿದ್ಧತೆ ಹಾಗೂ ಉತ್ತಮ ತರಬೇತಿ ಅತ್ಯಾವಶ್ಯಕ. ಆದರೆ ಅನೇಕ ಗ್ರಾಮೀಣ ಹಾಗೂ ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಸಂಪೂರ್ಣ ಅರಿವಿರುವುದಿಲ್ಲ. ಇದೇ ಕಾರಣದಿಂದ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಅದ್ಭುತವಾದ ಪರಿಕಲ್ಪನೆ ಯೊಂದಿಗೆ ಪ್ರಾರಂಭಿಸಿದ ವಿನೂತನ ಆವಿಷ್ಕಾರವೇ ಇಂಟಿಗ್ರೇಟೆಡ್ ಕೋರ್ಸ್ ಜೊತೆ ಸಿವಿಲ್ ಸರ್ವಿಸ್ ತರಬೇತಿ . ಪದವಿ ಪೂರ್ವ ಹಾಗೂ ಪದವಿ ಹಂತದಲ್ಲೇ ವಿದ್ಯಾರ್ಥಿಗಳನ್ನು ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಅಣಿಗೊಳಿಸುವುದು– Catch them young.
IAS/IPS/KAS ಸಿವಿಲ್ ಸರ್ವಿಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವ ಕನಸು ಕಂಡ ವಿದ್ಯಾರ್ಥಿಗಳ ಶೈಕ್ಷಣಿಕ ಅಡಿಪಾಯವನ್ನು ಭದ್ರಪಡಿಸುವ ಉದ್ದೇಶದಿಂದ ಕರ್ನಾಟಕದಲ್ಲೇ ಪ್ರಪ್ರಥಮ ಬಾರಿಗೆ, PUC ಆರ್ಟ್ಸ್, ಕಾಮರ್ಸ್ (Karnataka PU Board), BA, B.Com (Affiliated to Bengaluru University) ಜೊತೆಗೆ ಸಿವಿಲ್ ಸರ್ವಿಸ್ ಮಾರ್ಗದರ್ಶನ ಹಾಗೂ ತರಬೇತಿ ಆರಂಭಿಸಿದ್ದೇವೆ. ಅಲ್ಲದೇ ದೇಶದಲ್ಲೇ ಪ್ರಪ್ರಥಮ ಪ್ರಯೋಗವಾಗಿ BA LL.B 5 ವರ್ಷದ ಕೋರ್ಸ್ (Affiliated to Karnataka State Law University and Bar Council of India, Delhi) ಜೊತೆಗೆ ಉತ್ಕೃಷ್ಟ ಮಟ್ಟದ ಸಿವಿಲ್ ಸರ್ವಿಸ್ ತರಬೇತಿ ಆರಂಭಿಸಿದ ಹೆಗ್ಗಳಿಕೆ ನಮ್ಮದಾಗಿದೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಸರಕಾರದ ಪ್ರತಿಷ್ಟಿತ ಹುದ್ದೆಗಳಿಗೆ ನೇಮಕವಾಗುವಂತೆ ಪ್ರೇರೇಪಿಸುವುದು ಸಂಸ್ಥೆಯ ಸದುದ್ದೇಶ.
ಐ.ಎ.ಎಸ್ / ಐ.ಪಿ.ಎಸ್ ಮುಂತಾದ ಸಿವಿಲ್ ಸರ್ವಿಸ್ ಹುದ್ದೆಗಳು ಮಧ್ಯಮ ವರ್ಗದ ಕೈಗೆಟುಕದ ಕನಸು ಎಂಬ ನಿರಾಶಾಭಾವದಿಂದ ಪೋಷಕರು ತಮ್ಮ ಮಕ್ಕಳ ಕನಸನ್ನು ಚಿವುಟಿ ಹಾಕುತ್ತಾರೆ. ಈ ಕಾರಣದಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಕನಸು ಮತ್ತು ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ಬೇರ‍್ಯಾವುದೋ ವೃತ್ತಿಯಲ್ಲಿ ಕಳೆದು ಹೋಗುತ್ತಾರೆ. ಈ ಕಾರ್ಯಕ್ರಮದ ಉದ್ದೇಶ ಕೇವಲ ವಿದ್ಯಾರ್ಥಿಗಳಲ್ಲದೇ ಅಧ್ಯಾಪಕರು, ಪೋಷಕರಲ್ಲೂ ಈ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿ ಮಕ್ಕಳನ್ನು ಬಾಲ್ಯದಿಂದಲೇ ಸಮಾಜ ಸೇವೆಗೆ ಸಿದ್ಧರಾಗುವಂತೆ ಮಾಡುವುದು.
ದೇಶದಲ್ಲಿನ ಅತೀ ಹೆಚ್ಚು ಐ.ಎ.ಎಸ್ / ಐ.ಪಿ.ಎಸ್. ಅಧಿಕಾರಿಗಳು ಉತ್ತರ ಭಾರತದವರೇ ಆಗಿರುವುದು ಗಮನಾರ್ಹ. ಇದಕ್ಕೆ ಕಾರಣ ಅಲ್ಲಿನ ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೇಲಿನ ಒಲವು ಹಾಗೂ ಅರಿವು. ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಫ್ರೌಢಶಾಲಾ ಹಂತದಲ್ಲೇ ಸಿವಿಲ್ ಸರ್ವಿಸ್ ಪರೀಕ್ಷೆಗಳ ಸಿದ್ಧತೆ, ತರಬೇತಿ ನೀಡಲಾಗುತ್ತದೆ. ಇದೇ ಉದ್ದೇಶದಿಂದ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ದಕ್ಷಿಣ ಭಾರತದ ವಿದ್ಯಾರ್ಥಿಗಳಲ್ಲಿ ವಿಶೇಷವಾಗಿ ಕರ್ನಾಟಕದ ವಿದ್ಯಾರ್ಥಿಗಳನ್ನು ಉತ್ತರ ಭಾರತದ ಮಾದರಿಯಲ್ಲೇ, ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಉತ್ತೇಜಿಸಲು ಈ ಇಂಟಿಗ್ರೇಟೆಡ್ ಕೋರ್ಸ್ ಮೂಲಕ ಮುನ್ನುಡಿ ಬರೆದಿದೆ.
ಸ್ಪರ್ಧಾತ್ಮಕ ಪರೀಕ್ಷೆ ಎಂದರೇನು? ಎಂಬ ವಿಷಯದಿಂದ ಆರಂಭಿಸಿ ಓದುವ ವಿಧಾನ, ಸಿದ್ಧತಾ ಹಂತ, ಪ್ರಶ್ನೆ ಪತ್ರಿಕೆಯ ವಿಧಾನ, ಸ್ಟಡಿ ಮೆಟಿರಿಯಲ್, ಯಶಸ್ಸಿನ ಹಾದಿ, ಸಾಧಕರ ಹಿತ ನುಡಿ ಎಲ್ಲವನ್ನೂ ತರಬೇತಿಯೊಂದಿಗೆ ವಿದ್ಯಾರ್ಥಿಗಳಿಗೆ ವಿವರಿಸಲಾಗುತ್ತದೆ. ಅತ್ಯಾಧುನಿಕ ತಂತ್ರಜ್ಞಾನ, ಅತ್ಯುತ್ತಮ ಗುಣಮಟ್ಟದ ಗ್ರಂಥಾಲಯ ಮುಂತಾದ ಮೂಲ ಸೌಕರ್ಯಗಳಿರುವ ಸುಸಜ್ಜಿತ ಕಟ್ಟಡ ಹಾಗೂ ಪ್ರತಿಭಾನ್ವಿತ, ಅದ್ಭುತ ಕೌಶಲ್ಯ ಹೊಂದಿದ, ಅನುಭವಿ ಶಿಕ್ಷಕರಿಂದ ಗುಣಮಟ್ಟದ ತರಬೇತಿ, ಮಾರ್ಗದರ್ಶನ. ಈ ಎಲ್ಲಾ ಸೌಲಭ್ಯಗಳ ಸಂಪೂರ್ಣ ಪ್ರಯೋಜನ ಪಡೆಯುವುದರಿಂದ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ವಿಧಾನಗಳನ್ನು ರೂಢಿಸಿಕೊಂಡು ನಿರಾತಂಕವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು. ಒಂದು ಪರೀಕ್ಷೆಗೆ ಸಿದ್ಧರಾದಲ್ಲಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಯಾವುದಾದರೂ ಸರ್ಕಾರಿ ಉದ್ಯೋಗ ಪಡೆಯಬಹುದು.
ವಿಶೇಷವಾಗಿ ಸಿವಿಲ್ ಸರ್ವಿಸ್ ಪ್ರಿಲಿಮ್ನರಿ (Preliminary) ಪರೀಕ್ಷೆಯಲ್ಲಿ, ಹಿಸ್ಟರಿ (ಇತಿಹಾಸ), ಜಿಯಾಗ್ರಫಿ(ಭೂವಿಜ್ಞಾನ), ಎಕಾನಾಮಿಕ್ಸ್ (ಅರ್ಥಶಾಸ್ತ್ರ), ಪೊಲಿಟಿ (ರಾಜಕೀಯ ) ಈ ವಿಷಯಗಳಿಂದಲೇ ಸುಮಾರು 60% ರಷ್ಟು ಪ್ರಶ್ನೆಗಳನ್ನು ಎದುರಿಸಬೇಕಾಗುವುದು ಗಮನಾರ್ಹ. ಆದ್ದರಿಂದ ವರ್ಷಗಟ್ಟಲೇ ಇಂಜಿನಿಯರಿಂಗ್, ಮೆಡಿಕಲ್ ಮುಂತಾದ ಕೋರ್ಸ್ ಗಳಲ್ಲಿ ತೊಡಗಿಸಿಕೊಂಡು ನಂತರದಲ್ಲಿ ಸಿವಿಲ್ ಸರ್ವಿಸ್ ತರಬೇತಿ ಪಡೆದು, ಉತ್ತೀರ್ಣರಾಗುವಲ್ಲಿ ವ್ಯಯಿಸುವ ಶ್ರಮ, ಸಮಯ ಹಾಗೂ ಅನುಭವಿಸುವ ಆತಂಕ, ಗೊಂದಲಗಳಿಗೆ ಪೂರ್ಣವಿರಾಮ ನೀಡಿ, PUC ಮತ್ತು Degree ಹಂತದಲ್ಲೇ ಪಠ್ಯದೊಂದಿಗೆ, ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದರಿಂದ ಚಿಕ್ಕ ವಯಸ್ಸಿನಲ್ಲೇ ಐ.ಎ.ಎಸ್/ಐ.ಪಿ.ಎಸ್/ಕೆ.ಎ.ಎಸ್ ತೇರ್ಗಡೆಯಾಗಿ, CBI Head, IG/DG. Income Tax Chief Commissioner, State Chief Secretary etc ಮುಂತಾದ ಅತ್ಯುನ್ನತ ಮಟ್ಟದ, ಪ್ರತಿಷ್ಠಿತ ಹುದ್ದೆಗಳಲ್ಲಿ ರಾರಾಜಿಸುವ ಅವಕಾಶವಿದೆ.
ಸಾಧಿಸುವ ಛಲವಿದ್ದಲ್ಲಿ ಯಾವುದೇ ಸಾಧನೆಯನ್ನಾದರೂ ಸುಲಭದಲ್ಲಿ ಸಾಧಿಸಬಹುದು. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಚಿಕ್ಕ ವಯಸ್ಸಲ್ಲೇ ಈ ನಾಗರೀಕ ಸೇವಾ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಿ ಇಂಜಿನಿಯರಿಂಗ್, ಮೆಡಿಕಲ್ ವ್ಯಾಮೋಹದಿಂದ ಹೊರಬಂದು ಸುಭದ್ರ, ಉಜ್ವಲ ಭವಿಷ್ಯ ರೂಪಿಸಲು ದಾರಿದೀಪ ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್.
ಪದವಿ ಯೊಂದಿಗೆ ಸಿವಿಲ್ ಸರ್ವಿಸ್ ಕನಸನ್ನು ನನಸಾಗಿಸಲು ಸಂಪರ್ಕಿಸಿ: